Skip to main content

ಕನ್ನಡವನ್ನು ವಿಂಡೋಸ್ ನಲ್ಲಿ ಬಳಸುವ ವಿಧಾನ.

ಕನ್ನಡವನ್ನು ವಿಂಡೋಸ್ ತಂತ್ರಾಂಶದಲ್ಲಿ ಬಳಸುವ ವಿಧಾನ.


ನಮಸ್ಕಾರ!


  ನನ್ನ ಮಿತ್ರರಿಂದ ಬಂದ ಅಪಾರವಾದ ಕೋರಿಕೆಗಳ ಮೇರೆಗೆ ಇಲ್ಲಿ "ವಿಂಡೋಸ್ ಗಣಕದಲ್ಲಿ ಕನ್ನಡವನ್ನು ಹೇಗೆ ಬಳಸಬಹುದು" ಎಂದು ವಿವರಿಸಲು ಪ್ರಯತ್ನಿಸುತ್ತಿದ್ದೇನೆ.

                 ನಾನು ಇಲ್ಲಿ ತಿಳಿಸಿರುವ ಹಂತಗಳನ್ನು ಸ್ವತಃ ವಿಂಡೋಸ್ ೭, ವಿಂಡೋಸ್ , ವಿಂಡೋಸ್ ೮.೧ ಹಾಗೂ ವಿಂಡೋಸ್೧೦ ಆವೃತ್ತಿಗಳಲ್ಲಿ ಪರೀಕ್ಷಿಸಿದ್ದೇನೆ. ಹೇಗೂ, ನಿಮಗೆ ಕೊನೆಯಲ್ಲಿ ಯಾವುದೇ ಪ್ರಶ್ನೆ ಉಳಿದಿದ್ದರೂ ಅಥವಾ ನೀವು ಈ ಹಂತಗಳನ್ನು ಪ್ರಯತ್ನಿಸುವಾಗ ಎದುರಾಗಬಹುದಾದ ಯಾವುದೇ ಸಮಸ್ಯೆಗಳಿಗೆ ಈ ಲೇಖನದ ಕೆಳಗಡೆ ಇರುವ "ಅಭಿಪ್ರಾಯ ವಿಭಾಗದ" ಮೂಲಕ ನನಗೆ ತಿಳಿಸಿ.
                 ಕನ್ನಡವನ್ನು ಗಣಕದಲ್ಲಿ ಬಳಸುವುದು ಈಗ ಮೊದಲಿಗಿಂತಲೂ ತುಂಬಾ ಸರಳವಾಗಿದೆ. ಇದರಲ್ಲಿ ಮೈಕ್ರೋಸಾಫ್ಟ್ ಭಾಷಾ ಸಂಸ್ಥೆಯ ಕಾರ್ಯ ತುಂಬಾ ಮಹತ್ವದ್ದಾಗಿದೆ. ಮೈಕ್ರೋಸಾಫ್ಟ್ ನ ಈ ಅಂಗಸಂಸ್ಥೆಯು ಕನ್ನಡವನ್ನೊಳಗೊಂಡಂತೆ ಭಾರತೀಯ ಭಾಷೆಗಳನ್ನು ಗಣಕದಲ್ಲಿ ಬಳಸುವಿಕೆಯ ಬಗ್ಗೆ ಅನೇಕ ಪ್ರಯೋಗಗಳನ್ನು ಕೈಗೊಂಡು ಅವುಗಳಲ್ಲಿ ಸಫಲತೆಯನ್ನು ಕಂಡುಕೊಂಡಿದೆ. ಇದರಿಂದಾಗಿ ವಿಂಡೋಸ್ ವ್ಯವಸ್ಥೆಯು ವಿವಿಧ ಭಾಷಾ ವರ್ಗದ ಜನರಿಗೆ ಇನ್ನೂ ಹತ್ತಿರವಾಗಿದೆ.
ನೀವೂ ಕನ್ನಡವನ್ನು ನಿಮ್ಮ ಗಣಕದಲ್ಲಿ ಬಳಸಲು ಕಾತುರರಾಗಿದ್ದೀರಾ? ಹಾಗಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ ೧:
          ಕನ್ನಡವನ್ನು ಗಣಕದಲ್ಲಿ ಬಳಸಲು ಮೊದಲು “ ಮೈಕ್ರೋಸಾಫ್ಟ್ ಇಂಡಿಕ್ ಲ್ಯಾಂಗ್ವೇಜ್ ಇನ್ಫುಟ್ ಟೂಲನ್ನು” ಇಲ್ಲಿಂದ ಗಣಕ್ಕಕ್ಕಿಳಿಸಿ.
How to use Kannada language in computer.


ಹಂತ ೨:
          ಮೇಲಿನ ಕೊಂಡಿಯಿಂದ ನೀವು ತೊಂದರೆ ಎದುರಿಸಿದ್ದರೆ, ಈ ಪರ್ಯಾಯ ವಿಧಾನವನ್ನುಬಳಸಿ ಅದನ್ನು ಪಡೆಯಬಹುದು. ಈ ಪರ್ಯಾಯ ವಿಧಾನದಲ್ಲಿ .exe ಹಾಗೂ .zipx ರೂಪದ ಕಡತಗಳನ್ನು ಇರಿಸಲಾಗಿದೆ.
ನಿಮ್ಮ ಬಳಿ WinZip ಅಥವಾ ಸಮನಾದಉಪಕರಣವಿಲ್ಲದಿದ್ದರೆ ಅದನ್ನು ಉಚಿತವಾಗಿ ಇಲ್ಲಿ ಪಡೆಯಬಹುದು.

ಹಂತ ೩:
          ಇಳಿಸಿಕೊಂಡ ಕಡತವನ್ನು ನಿರ್ವಾಹಕ ಕ್ರಮದಲ್ಲಿ (Run as Administrator) ತೆರೆಯಿರಿ.
How to use Kannada language in Windows.

ಹಂತ ೪:
          ನೀವು ಅನುಮತಿಯ ಬಗ್ಗೆ ಕೆಳಲ್ಪಟ್ಟರೆ "Yes" ಆಯ್ಕೆ ಮಾಡಿ. ಹಾಗೂ ಕಡತ ಅನುಸ್ತಾಪನೆಗೊಳ್ಳುವವರೆಗೆ ನಿರೀಕ್ಷಿಸಿ.
How to use Kannada language in digital world.

ಹಂತ ೫:
          ಕಡತವು ಅನುಸ್ತಾಪನೆಗೊಂಡ ಮೇಲೆ "ಮುಂದೆ (Next)" ಗುಂಡಿಯನ್ನು ಒತ್ತಿ. ಇಲ್ಲಿ ನೀವು ಬಯಸುವ ಯಾವುದೇ ಐಚ್ಛಿಕ ನಿಲುವನ್ನು ಆಯ್ಕೆ ಮಾಡಬಹುದು - ಈ ತಂತ್ರಾಂಶದ ಮೇಲ್ವಿಚಾರಣೆಯ ಬಗ್ಗೆ ಸೂಚನೆ ಪಡೆಯುವಿಕೆ ಹಾಗೂ ಮೈಕ್ರೋಸಾಫ್ಟ್ ನ ಈ ತಂತ್ರಾಂಶವನ್ನು ಇನ್ನೂ ಉತ್ತಮಗೊಳಿಸಲು ನೀವು ಭಾಗಿಯಾಗುವಂತೆ ಆಯ್ಕೆಮಾಡಬಹುದು.
Using Kannada language in computer.

ಹಂತ ೬:
          ನಿಯಮಗಳಿಗೆ ನಿಮ್ಮ ಸಮ್ಮತಿಯನ್ನು ಸೂಚಿಸಿ, "ಅನುಸ್ತಾಪಿಸು (Install)" ಗುಂಡಿಯನ್ನು ಒತ್ತಿರಿ.
Using Kannada language in Windows.

ಹಂತ ೭:
          ಅನುಸ್ತಾಪನೆ ಮುಗಿಯುವವರೆಗೆ ತಾಳ್ಮೆಯಿಂದಿರಿ.
Using Kannada language in digital world.

ಹಂತ ೮:
          ಅನುಸ್ತಾಪನೆಯು ಯಶಸ್ವಿಯಾಗಿ ಮುಗಿದಮೇಲೆ "ಮುಚ್ಚು (Close)" ಗುಂಡಿಯನ್ನು ಒತ್ತಿ.
Using Kannada language in gadgets.

ಹಂತ ೯:
          ಹುರ್ರೇ... ಈಗ ಕನ್ನಡವನ್ನು ನಿಮ್ಮ ಗಣಕದಲ್ಲಿ ಬಳಸಲು ಸಂಪೂರ್ಣ ತಯಾರಿ ಮುಗಿದಿದೆ!
ನಿಮ್ಮ ಗಣಕದಲ್ಲಿಯ ಮೊದಲ ಕನ್ನಡ ಬಳಕೆಯನ್ನು ಪರೀಕ್ಷಿಸಲು ಒಂದು ಹೊಸ ನೋಟ್ ಪ್ಯಾಡ್ ತೆರೆಯಿರಿ.
How to use Kannada language in gadgets.

ಹಂತ ೧೦:
            ಇನ್ಫುಟ್ ಕರ್ಸರ್ ನೋಟ್ ಪಾಡ್ ನಲ್ಲಿರುವಂತೆ ನೋಡಿಕೊಳ್ಳಿ.
Kannada in computer.

ಹಂತ ೧೧:
            ಈಗ ಸ್ಟೇಟಸ್ ಬಾರಿನಲ್ಲಿ ಬಲಗೈ ಬದಿಯಲ್ಲಿ "EN ಅಥವಾ ENG" ಹೆಸರಿನ ಒಂದು ಭಾಷಾ ಬಿಂಬವನ್ನು ಕಾಣಬಹುದು. ಅದರ ಮೇಲೆ ಒತ್ತಿರಿ.
Kannada language in computer.

ಹಂತ ೧೨:
            ತೆರೆಯುವ ಕಿರು ಕಿಂಡಿಯಲ್ಲಿ "KD ಅಥವಾ KAN" ಹೆಸರಿನ "Kannada (India)" ಆಯ್ಕೆಯನ್ನು ಆರಿಸಿಕೊಳ್ಳಿ.
Typing in Kannada language in computer.

ಹಂತ ೧೩:
            ಈಗ ನಿಮ್ಮ ಇನ್ಫುಟ್ ಕರ್ಸರ್ ನೋಟ್ ಪಾಡ್ ನಲ್ಲಿರುವುದರ ಜೊತೆಗೆ ಸ್ಟೇಟಸ್ ಬಾರ್ ನಲ್ಲಿಯ ಭಾಷಾ  ಬಿಂಬವು "KD" ಹೆಸರಿನೊಂದಿಗೆ, ಕನ್ನಡದ "ಅಕ್ಷರ ತೋರಿಸುವುದನ್ನು ಕಾಣಬಹುದು.
Kannada text in Windows computers.


ಹಂತ ೧೪:
            ಈಗ ನೋಟ್ ಪಾಡ್ ನಲ್ಲಿ "Kannada" ಎಂದು ಛಾಪಿಸಿ ಹಾಗೂ ತೆರೆಯುವ ಕಿರು ಕೊಂಡಿಯಲ್ಲಿ ನಿಮಗೊಪ್ಪುವ ಆಯ್ಕೆಯನ್ನು ಆರಿಸಲು ಕೀಲಿಮಣೆಯ ಮೇಲೆ-ಕೆಳಗಿನ ಗುಂಡಿಗಳನ್ನು ಬಳಸಿ. ನಿಮಗೊಪ್ಪುವ ಆಯ್ಕೆಯು ಪ್ರಮುಖವಾದಾಗ ಸ್ಪೇಸ್ ಅಥವಾ ಎಂಟರ್ ಗುಂಡಿಯನ್ನು ಒತ್ತಿ.
Nudi in Windows computer.

ಹಂತ ೧೫:
            ಈಗ ಎರಡನೆಯ ಹಾಗೂ ಮುಂದಿನ ಎಲ್ಲ ಪದವನ್ನೂ(ಗಳನ್ನೂ) ಇದೇ ರೀತಿ ಛಾಪಿಸಿ.
Kannada lipi in windows computer.

ಹಂತ ೧೬:
            ಎಲ್ಲ ಮುಗಿದ ನಂತರ ಕಡತವನ್ನು ಉಳಿಸಲು "ಹೀಗೆ ಉಳಿಸು (Save as)" ಆಯ್ಕೆ ಮಾಡಿ.
Using Kannada lipi in computer.

ಹಂತ ೧೭:
            ತೆರೆಯುವ ಪಾಪ್ ಅಪ್ ನಲ್ಲಿ ನಿಮಗೆ ಬೇಕಾದ ಮಾರ್ಗ ಹಾಗೂ ಕಡತದ ಹೆಸರನ್ನು ನಮೂದಿಸಿ (ನೆನಪಿರಲಿ ಇಲ್ಲಿಯೂ ನೀವು ಕನ್ನಡವನ್ನು ಬಳಸಬಹುದು! ಹಾಗಾದರೆ ಈ ಕಡತಕ್ಕೆ ಕನ್ನಡದಲ್ಲಿಯೇ ಒಂದು ಹೆಸರಿಡಿದಿ).
Using Kannada lipi in windows computer.

ಹಂತ ೧೮:
            ಸಂಕೇತಿಸುವಿಕೆ(Encoding)ಯಲ್ಲಿ "UTF-8 ಅಥವಾ UTF-16" ಆಯ್ಕೆ ಮಾಡಿ.
Enter Kannada text lipi in Windows computer.

ಹಂತ ೧೯:
            ಉಳಿಸು (Save) ಮೇಲೆ ಒತ್ತಿರಿ.
Editing in Kannada language lipi in Windows computer systems.

ಶುಭಾಷಯಗಳು!!! ನೀವೀಗ ಯಶಸ್ವಿಯಾಗಿ ಗಣಕದಲ್ಲಿ ಕನ್ನಡವನ್ನು ಬಳಸಲಾರಂಭಿಸಿದ್ದೀರಿ.

ಯಾವುದೇ ಹೊಸತಾಗಿರುವುದನ್ನು ಅನುಸರಿಸುವಾಗ ಸಮಸ್ಯೆಗಳು ಎದುರಾಗುವುದು ಸಹಜ. ಈ ಪ್ರಕ್ರೀಯೆಯಲ್ಲಿ ನಿಮಗೇನಾದರೂ ತೊಂದರೆಯಾಗಿದ್ದರೆ ದಯವಿಟ್ಟು ಕೆಳಗಡೆಯ "ಪ್ರತಿಕ್ರೀಯೆ ವಿಭಾಗ" ಅಥವಾ "ಅನಿಸಿಕೆ (Feedback)" ಟ್ಯಾಬ್ ಮೂಲಕ ನಮಗೆ ತಿಳಿಸಿ.


ಧನ್ಯವಾದಗಳು.

ಕೊನೆಯಲ್ಲಿ ನೀವು ಯಾವುದೇ ಸಮಸ್ಯೆ ಎದುರಿಸಿತ್ತಿದ್ದಲ್ಲಿ, ಈ ಕಡತವು ನೆರವಾಗಬಹುದು ಅಥವಾ ಮೈಕ್ರೋಸಾಫ್ಟ್ ಭಾಷಾ ಇಂಡಿಯಾದ ಮಾಹಿತಿಪುಟಕ್ಕೆ ಭೇಟಿನೀಡಬಹುದು.


Popular posts from this blog

ಕನ್ನಡದಲ್ಲಿ ಪೇಟಿಎಂ - ಹಳತು ಹೊನ್ನು

ಕರ್ನಾಟಕಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂತ್ರಸ್ತರಿಗೆ ಸಹಾಯಮಾಡುವುದು ಎಷ್ಟು ಸರಳವಾಗಿದೆ ಎನ್ನುವುದರ ಬಗ್ಗೆ ಸಂದೇಶಗಳನ್ನು ಕಳುಹಿಸಿದ್ದೆವು.
ಸಾಕಷ್ಟು ಜನ ಆಗ ನಾವು ಕಳಿಸಿದ್ದ ಸಂದೇಶಗಳಲ್ಲಿ ಪೇಟಿಎಂ ಕನ್ನಡದಲ್ಲಿರುವುದನ್ನು ಗಮನಿಸಿ, "ಪೇಟಿಎಂಅನ್ನು ಕನ್ನಡದಲ್ಲಿ ಬಳಸುವುದು ಹೇಗೆ" ಎಂಬ ಪ್ರಶ್ನೆಗಳನ್ನು ಕಳಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಇಂದಿನ ಈ ಲೇಖನ :)


ನಿಮ್ಮ ಬಳಿ ಈಗಾಗಲೆ ಪೇಟಿಎಂ ಲಭ್ಯವಿದ್ದರೆ ಹಂತ ೭ರಿಂದ ಮುಂದುವರೆಯಬಹುದು.
ಈ ಲೇಖನದಲ್ಲಿ ಪೇಟಿಎಂಅನ್ನು ಕನ್ನಡದಲ್ಲಿ ಬಳಸುವ ವಿಧಾನಗಳನ್ನು ಕಾಣಬಹುದು - ಹಳತು ಹೊನ್ನು. in this article you can find out how to use paytm in kannada - Halatu Honnu ಹಂತ ೧:ಈ ಲೇಖನದಲ್ಲಿ ಪೇಟಿಎಂಅನ್ನು ಕನ್ನಡದಲ್ಲಿ ಬಳಸುವ ವಿಧಾನಗಳನ್ನು ಕಾಣಬಹುದು - ಹಳತು ಹೊನ್ನು. in this article you can find out how to use paytm in kannada - Halatu Honnu                 ನಿಮ್ಮ ಮೊಬೈಲ್ನಲ್ಲಿ ಗೂಗಲ್ ಪ್ಲೇಸ್ಟೋರ್ ತೆರೆದು, ಪೇಟಿಎಂ ಎಂದು ಹುಡುಕಿ. ಈ ಲೇಖನದಲ್ಲಿ ಪೇಟಿಎಂಅನ್ನು ಕನ್ನಡದಲ್ಲಿ ಬಳಸುವ ವಿಧಾನಗಳನ…

ಗಣಕದ ದಿನಾಂಕ, ಸಮಯ ಹಾಗು ಅಂಕಿಗಳನ್ನು ಕನ್ನಡಕ್ಕೆ ಹೊಂದಿಸಿ - ಹಳತು ಹೊನ್ನು

ಪರಿವಿಡಿ೧. "ದಿನಾಂಕ ಮತ್ತು ಸಮಯ"ದ ನಿಲುವು(ಸೆಟ್ಟಿಂಗ್)ಗಳನ್ನು ತೆರೆಯುವ ವಿಧಾನಗಳು೧.೧. ವಿಂಡೋಸ್ ೧೦ ಗಡಿಯಾರದ ಮೂಲಕ೧.೨. ವಿಂಡೋಸ್ ಗುಂಡಿಯ ಮೂಲಕ೧.೩. ಕೋರ್ಟಾನಾ ಮೂಲಕ೧.೪. ಕಂಟ್ರೋಲ್ ಪ್ಯಾನಲ್ ಮೂಲಕ೧.೪.೧. ಕಂಟ್ರೋಲ್ ಪ್ಯಾನಲ್ನಲ್ಲಿರುವ ನೇರ ಕೊಂಡಿಯ ಮೂಲಕ೧.೪.೨. ಕಂಟ್ರೋಲ್ ಪ್ಯಾನಲ್ನಲ್ಲಿ ಹುಡುಕುವ ಮೂಲಕ೨. ಸ್ವರೂಪವನ್ನು ಕನ್ನಡಕ್ಕೆ ಹೊಂದಿಸಿ೩. ಅಂಕಿಗಳನ್ನು ಕನ್ನಡಕ್ಕೆ ಹೊಂದಿಸಿ೪. ರುಪಾಯಿ/ಹಣಕಾಸಿನ ಹೊಂದಾಣಿಕೆ೫. ಸಮಯವನ್ನು ಕನ್ನಡಕ್ಕೆ ಹೊಂದಿಸಿ೬. ದಿನಾಂಕವನ್ನು ಕನ್ನಡಕ್ಕೆ ಹೊಂದಿಸಿ೧. "ದಿನಾಂಕ ಮತ್ತು ಸಮಯ"ದ ನಿಲುವು(ಸೆಟ್ಟಿಂಗ್)ಗಳನ್ನು ತೆರೆಯುವ ವಿಧಾನಗಳು೧.೧. ವಿಂಡೋಸ್ ೧೦ ಗಡಿಯಾರದ ಮೂಲಕಕೆಲಸದ ಪಟ್ಟಿ(ಟಾಸ್ಕ್ ಬಾರ್)ಯ ಮೇಲಿರುವ ಗಡಿಯಾರದ ಮೇಲೆ ಮೌಸ್ ಬಲಗುಂಡಿಯನ್ನು ಒತ್ತಿ.


ತೆರೆದುಕೊಳ್ಳುವ ಸಾಂದರ್ಭಿಕ ಮೆನುವಿನಲ್ಲಿ "Adjust date/time (ಚಿತ್ರದಲ್ಲಿ ತೋರಿಸಿರುವಂತೆ)" ಒತ್ತಿ.


ಈಗ ನಿಲುವು(ಸೆಟ್ಟಿಂಗ್)ಗಳ ಪರದೆ ತೆರೆದುಕೊಳ್ಳುತ್ತದೆ. ಕೆಳಗಡೆಯವರೆಗೆ ಪರದೆಯನ್ನು ಉರುಳಿಸಿ (ಸ್ಕ್ರೋಲ್ ಮಾಡಿ), ಅಲ್ಲಿ ಕಾಣುವ "Additional date, time, & regional settings" ಆಯ್ಕೆಮಾಡಿ.ಈಗ ಕಾಣುವ ಪರದೆಯಲ್ಲಿ "Date and Time"ಅನ್ನು ಆಯ್ಕೆಮಾಡಿ.


ಈಗ "ದಿನಾಂಕ ಮತ್ತು ಸಮಯ"ದ ನಿಲುವು(ಸೆಟ್ಟಿಂಗ್) ಪರದೆ ತೆರೆದುಕೊಳ್ಳುತ್ತದೆ…